ಭಾನುವಾರ, ಏಪ್ರಿಲ್ 25, 2021

ಅರಿಕೆ

 

ಅರಿಕೆ

̐

ವಿದ್ಯಾವಾಚಸ್ಪತಿ ಶ್ರೀಯುತ ಬನ್ನಂಜೆ ಗೋವಿಂದಾಚಾರ್ಯ್ಯ ಅವರ ಉಪನಿಷತ್ ಪ್ರವಚನವನ್ನು ಪುಸ್ತಕ ರೂಪದಲ್ಲಿ ಇಲ್ಲಿ ಪ್ರಸ್ತುತಪಡಿಸಲಾಗಿದೆ. ಈ ಪುಸ್ತಕವನ್ನು ಆಚಾರ್ಯರ ಪ್ರವಚನದ ದ್ವನಿಸುರುಳಿಯನ್ನು ಕೇಳಿಸಿಕೊಂಡು ಬರೆದುಕೊಂಡಿದ್ದು, ಹಾಗೆ ಬರೆಯುವಾಗ ಬರೆದುಕೊಂಡವರು  ತಮಗೆ ಅರ್ಥವಾದ ರೀತಿಯಲ್ಲಿ ಬರೆದುಕೊಂಡಿರಬಹುದು. ಆದ್ದರಿಂದ ಇಲ್ಲಿ ಏನಾದರೂ ತಪ್ಪು ಅಂಶ ಕಂಡುಬಂದರೆ ಅದಕ್ಕೆ ಬರೆದುಕೊಂಡ ನಾವೇ ಹೊಣೆಗಾರರು ಹೊರತು ಆಚಾರ್ಯರಲ್ಲ.

ಪ್ರಾಚೀನ ವಯ್ಯಾಕರಣ ಶಾಕಲ್ಯನ  "ಸರ್ವತ್ರ ಶಾಕಲ್ಯಸ್ಯ" ಎಂಬ ಸೂತ್ರದಂತೆ ' ' ಕಾರವು ಸ್ವರದ ಮುಂದೆ ಬಂದರೆ, ಅದರ ಎದುರಿರುವ ಯಾವುದೇ ವ್ಯಂಜನ ಎರಡು ಬಾರಿ ಬರುತ್ತದೆ. ಉದಾ:  ವರ್ + ಯ = ವರ್ಯ್ಯ. "ಅಚೋ ರಹಾಭ್ಯಾಂ ದ್ವೇ" ಎನ್ನುವ ಪಾಣಿನಿಯ ಸೂತ್ರವೂ ಕೂಡಾ ಇದನ್ನೇ ಹೇಳುತ್ತದೆ.  ಈ ಸೂತ್ರವನ್ನು ಬಹುಶಃ ವಿಕಲ್ಪವೆಂದು ಬಗೆದು ಬಹಳಷ್ಟು ಸಂಸ್ಕೃತ ತಜ್ಞರು ಬಳಸುವುದಿಲ್ಲ. ಆದರೆ ಅದು ನಿಜವಾದ ಪ್ರಯೋಗ. ವ್ಯಾಕರಣಕ್ಕೆ ಬಹಳ ಸಮ್ಮತವಾದ ಪ್ರಯೋಗ. ಉದಾಹರಣೆಗೆ ತಾತ್ಪರ್ಯ ಇದ್ದದ್ದು ತಾತ್ಪರ್ಯ್ಯ ಆಗುತ್ತದೆ, ಆಚಾರ್ಯ ಇದ್ದದ್ದು  ಆಚಾರ್ಯ್ಯ  ಆಗುತ್ತದೆ,  ನಿರ್ಣಯ ಇದ್ದದ್ದು ನಿರ್ಣ್ಣಯಃ  ಆಗುತ್ತದೆ, ಇತ್ಯಾದಿ. ಬನ್ನಂಜೆ ಗೋವಿಂದಾಚಾರ್ಯ್ಯರ ಸಂಸ್ಕೃತ  ಗ್ರಂಥಗಳಲ್ಲಿ ಇಷ್ಟು  ಸೂಕ್ಷ್ಮ ವ್ಯಾಕರಣ ವೈಶಿಷ್ಟ್ಯಗಳನ್ನು ಕಾಣುವುದು ಒಂದು ಹಬ್ಬ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಸಂಸ್ಕೃತ ಶ್ಲೋಕಗಳನ್ನು ಪ್ರಸ್ತುತಪಡಿಸುವ ಕಿರುಪ್ರಯತ್ನವನ್ನು ಮಾಡಿರುವುದನ್ನು ಓದುಗರು ಗಮನಿಸಬೇಕು.

ಕನ್ನಡದಲ್ಲಿ ಒತ್ತಕ್ಷರ ಬರೆಯುವ ಲಿಪಿವ್ಯವಸ್ಥೆಯಲ್ಲಿ ಒಂದು ತೊಂದರೆ ಇದೆ. ಉದಾಹರಣೆಗೆ: ಕೃಷ್ಣ, ವ್ಯಾಸ, ದತ್ತಾತ್ರೇಯ. ಇಲ್ಲಿ ಉಚ್ಚಾರದ ಪ್ರಕಾರ , , ಅರ್ಧಾಕ್ಷರಗಳು ಮತ್ತು , , ಪೂರ್ಣಾಕ್ಷರಗಳು.  ಆದರೆ ಕನ್ನಡದಲ್ಲಿ ಅರ್ಧಾಕ್ಷರಗಳನ್ನು ಇಡಿಯಾಗಿ ಮೇಲೆ ಬರೆಯುತ್ತೇವೆ. ಇಡಿ ಅಕ್ಷರಗಳನ್ನು ಒತ್ತಾಕ್ಷರವಾಗಿ ಮತ್ತು ಅರ್ಧಾಕ್ಷರವಾಗಿ ಬರೆಯುತ್ತೇವೆ. ಆದರೆ ತುಳು ಮತ್ತು ದೇವನಾಗರಿ ಲಿಪಿಯಲ್ಲಿ ಈ ಸಮಸ್ಯೆ ಇಲ್ಲ. ಅಲ್ಲಿ ಒತ್ತಾಕ್ಷರಗಳ ಆನಂತರ ಪೂರ್ಣಾಕ್ಷರಗಳನ್ನು ಬರೆಯುವ ವ್ಯವಸ್ಥೆ ಇದೆ. ಉದಾಹರಣೆಗೆ :

   

ಸಂಸ್ಕೃತ ಭಾಷೆಯಲ್ಲಿ ಅನುನಾಸಿಕ ಮತ್ತು ಅನುಸ್ವಾರಗಳ ಉಚ್ಚಾರ ಸ್ಪಷ್ಟವಾಗಿರಬೇಕು. ಉದಾಹರಣೆಗೆ: ಪಂಚಎನ್ನುವುದರ ಸರಿಯಾದ ರೂಪ  ಪಞ್ಚ’ ; ಅದೇ ರೀತಿ  ಅಂಗ->ಅಙ್ಗ, ದಂಡ->ದಣ್ಡ, ತಂತು->ತನ್ತು, ಇತ್ಯಾದಿ.  ಇಲ್ಲಿ ನಾವು ಶ್ಲೋಕಗಳನ್ನು ಪ್ರಸ್ತುತಪಡಿಸುವಾಗ ಈ ಅನುನಾಸಿಕ ಮತ್ತು ಅನುಸ್ವಾರಗಳನ್ನು ಗಮನದಲ್ಲಿಟ್ಟುಕೊಂಡು  ಪ್ರಸ್ತುತಪಡಿಸಿರುವುದನ್ನು ಓದುಗರು ಗಮನಿಸಬೇಕು.

 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ